ಬುದ್ಧದತ್ತ
ಕ್ರಿಸ್ತಾಬ್ದ ಐದನೆಯ ಶತಮಾನದಲ್ಲಿ ಕಾಂಚೀಪುರದ ಪರಿಸರದಲ್ಲಿ ಜನ್ಮವೆತ್ತಿದ ಈತ ದಕ್ಷಿಣ ಭಾರತದಲ್ಲಿ ಹಲವಾರು ಕಡೆ ವಾಸಮಾಡಿ ಅನಂತರ ಸಿಂಹಳದ್ವೀಪಕ್ಕೆ ತೆರಳಿ ಅಲ್ಲಿ ಬುದ್ಧ ಘೋಷಾಚಾರ್ಯನನ್ನು ಮಹಾ ವಿಹಾರದಲ್ಲಿ ಸಂಧಿಸಿದ. ಈತ ಬುದ್ಧವಂಶವೆಂಬ ಪ್ರಾಚೀನ ಗ್ರಂಥಕ್ಕೆ ವ್ಯಾಖ್ಯಾನ ಬರೆದುದಲ್ಲದೆ ಅಭಿಧಮ್ಮ ಮತ್ತು ವಿನಯಗಳ ಮೇಲೆ ಸ್ವತಂತ್ರ ಗ್ರಂಥಗಳನ್ನು ಪಾಳೀಭಾಷೆಯಲ್ಲಿ ರಚಿಸಿದ್ದಾನೆ. ಇವನ ಗ್ರಂಥಗಳಲ್ಲಿ ರೂಪಾರೂಪ ವಿಭಾಗ, ಅಭಿಧಮ್ಮಾವತಾರ, ವಿನಯವಿನಿಚ್ಚಯ-ಇವು ಪ್ರಸಿದ್ಧವಾಗಿವೆ.											
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ